Kannada Actor ShivaRajkumar starr Tagaru Movie Shooting Is Goin On. And Shivanna Made Video Of Tagaru dosa . Please watch Fan makes 'Tagaru' Dosa <br /> <br /> ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದ ಕ್ರೇಜ್ ದಿನೇ ದಿನೇ ಜೋರಾಗುತ್ತಿದೆ. ಶಿವಣ್ಣ ಸಿನಿಮಾಗಾಗಿ ಅನೇಕ ದಿನಗಳಿಂದ ಫ್ಯಾನ್ಸ್ ಕಾಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಅಭಿಮಾನಿ ತಮ್ಮ ಅಭಿಮಾನವನ್ನು 'ಟಗರು' ದೋಸೆ ಮಾಡಿ ತೋರಿಸಿದ್ದಾರೆ. ದಾವಣಗೆರೆಯ ಈ ಅಪ್ಪಟ್ಟ ಶಿವಣ್ಣನ ಅಭಿಮಾನಿ ದೊಡ್ಡ ದೋಸೆ ಮಾಡಿ ಅದಕ್ಕೆ 'ಟಗರು' ಟೈಟಲ್ ಬರೆದಿದ್ದಾರೆ. 'ಟಗರು' ದೋಸೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಶಿವಣ್ಣ ಫ್ಯಾನ್ಸ್ ಕಾರು, ಬೈಕ್ ಗಳಿಗೆ 'ಟಗರು' ಸಿನಿಮಾದ ಚಿತ್ರ ಬರೆಸಿಕೊಂಡು ಕ್ರೇಜ್ ಸೃಷ್ಟಿಸಿದ್ದರು. ಈಗ ಈ ಅಭಿಮಾನಿ ಒಂದು ಹೆಜ್ಜೆ ಮುಂದೆ ಹೋಗಿ 'ಟಗರು' ದೋಸೆ ಮಾಡಿದ್ದಾರೆ.
